ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕನವರಾದ ಅನಸೂಯಾ ಸಿದ್ಧರಾಮ ಅವರು ಕನ್ನಡದ ಹೆಸರಾಂತ ಲೇಖಕಿ. ಸಧ್ಯಕ್ಕೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅವರು ಕಳೆದ ಮೂರು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಇವರು ಗಂಭೀರ ಹಾಗು ವಿನೋದ ಈ ಎರಡೂ ಬಗೆಯ ಬರವಣಿಗೆಯಲ್ಲಿ ಇವರು ಸಿದ್ಧಹಸ್ತರು. ಇವರ ಅಗಣಿತ ಲೇಖನಗಳು ತರಂಗ, ತುಷಾರ,ಕರ್ಮವೀರ ಮುಂತಾದ ಕನ್ನಡದ ವಾರ ಮತ್ತು ಮಾಸಿಕ ಪತ್ರಿಕೆಗಳಲ್ಲಿ ಪ್ರಕತಟಗೊಂಡಿವೆ. ಇವರು ಹೊರತಂದ ಕೃತಿಗಳು ಈ ಕೆಳಗಿನಂತಿವೆ: == ಕೃತಿಗಳು == === ವಿನೋದ === ಸ್ವಪ್ನಲೋಕದ ಸ್ವಾರಸ್ಯಗಳು ಸುಂದ್ರಿ === ಕಥಾಸಂಕಲನ === ತಾನು ಎಂಬ ತೊಡಕು ಕಳ್ಳಗಿಂಡಿಯ ಕೊರೆದು == ಪುರಸ್ಕಾರ == " ತಾನು ಎಂಬ ತೊಡಕು" ಕಥಾಸಂಕಲನಕ್ಕೆ ಈ ಪ್ರಶಸ್ತಿಗಳು ದೊರೆತಿವೆ: ಹುನಗುಂದ ತಾಲೂಕಿನ ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ ಬೆಳಗಾವಿ ಜಿಲ್ಲೆಯ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಪ್ರಶಸ್ತಿ ಕನ್ನಡ ಲೇಖಕಿಯರ ಪರಿಷತ್ತಿನ ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ ಪತ್ರ. "ಕಳ್ಳಗಿಂಡಿಯ ಕೊರೆದು" ಕಥಾ ಸಂಕಲನಕ್ಕೆ ಕರ್ನಾಟಕ ಸಂಘ ಶಿವಮೊಗ್ಗ ಅವರ ಯು.ಆರ್.ಅನಂತಮೂರ್ತಿ ಪ್ರಶಸ್ತಿ.